ನಿರ್ದೇಶನ ಮತ್ತು ಆಡಳಿತ-125-ಆಧುನೀಕರಣ ಆಯವ್ಯಯ ಅವಕಾಶ: ರೂ.15.00 ಲಕ್ಷಗಳು ಆರ್ಥಿಕ ಸಹಾಯದ ವಿಧ: ಸಹಾಯಧನ ಯೋಜನೆಯ ಉದ್ದೇಶ: ಇಲಾಖೆಯ ಕಛೇರಿಗಳ ಆಧುನೀಕರಣ, ತಂತ್ರಾಂಶ ಅಭಿವೃದ್ಧಿ ಗಣಕೀಕರಣ, ಕಡತಗಳಅಂಕೀಕರಣಕ್ಕೆ ಸಂಬಂಧಿಸಿದಂತೆ ಸಹಾಯಧನ ನೀಡುವುದು. ಕಛೇರಿಗಳಿಗೆ ಪೋಟೋಕಾಫಿಯರ್, ಗಣಕಯಂತ್ರ, ಫ್ಯಾಕ್ಷ್ ಯಂತ್ರಗಳ ಖರೀದಿ ಮಾಡುವುದು. ಅಂದಾಜು ಫಲಿತಾಂಶ : ಸಂಪೂರ್ಣ ಗಣಕೀಕೃತ ಕಛೇರಿಗಳ ಮೂಲಕ ತ್ವರಿತ , ಪರಿಣಾಮಕಾರಿಯಾದ ಆಡಳಿತವನ್ನು ನೀಡಲು ಹಾಗೂ ಸಿಬ್ಬಂದಿಯು ಕಾರ್ಯ ನಿಪುಣತೆಯನ್ನು ಹೆಚ್ಚಿಸಲು ಅನುಕೂಲಗಾಗುತ್ತದೆ. ಬೆಳೆ ಸಾಲಕ್ಕಾಗಿ ಬಡ್ಡಿ ಸಹಾಯಧನ ಆಯವ್ಯಯ ಅವಕಾಶ: ರೂ. 73741.00/- ಲಕ್ಷಗಳು ಆರ್ಥಿಕ ಸಹಾಯದ ವಿಧ: ಸಹಾಯಧನ ಯೋಜನೆಯ ಉದ್ದೇಶ: ಅಲ್ಪಾವಧಿ ಕೃಷಿ ಸಾಲದ ಮೇಲಿನ ಬಡ್ಡಿಯನ್ನು ಶೇಕಡ ಶೂನ್ಯಕ್ಕೆ ಇಳಿಸುವುದು ಹಾಗೂ ಸರ್ಕಾರದ ಬದ್ಧತೆಯಂತೆ ಸಹಕಾರ ಸಂಘಗಳು ವಿತರಿಸಿರುವ ಸಾಲಗಳ ಮೇಲೆ ಬಡ್ಡಿ ಸಹಾಯಧನವನ್ನು ನೀಡುವುದು. ಅಂದಾಜು ಫಲಿತಾಂಶ: ಕೃಷಿ ಸಾಲದ ವ್ಯವಸ್ಥೆಯು ಬಲಗೊಳಿಸಿ , ರೈತರಿಗೆ ಕೃಷಿ ಸಾಲವು ಸುಲಭ ದರದಲ್ಲಿ ದೊರೆಯುವಂತೆ ಮಾಡುವುದು. ಗಿರಿಜನ ಉಪಯೋಜನೆ ಗಿರಿಜನ ಉಪಯೋಜನೆ- ಲ್ಯಾಂಪ್ಸ್ ಸಂಯುಕ್ತ ಸಂಘಗಳಿಗೆ ಮಾರುಕಟ್ಟೆ ಮೂಲ ಸೌಕರ್ಯಗಳ ಸ್ಥಾಪನೆ. ಆಯವ್ಯಯ ಅವಕಾಶ: ರೂ.50.00 ಲಕ್ಷಗಳು ಆರ್ಥಿಕ ಸಹಾಯದ ವಿಧ: ಸಹಾಯಧನ ಯೋಜನೆಯ ಉದ್ದೇಶ: ಲ್ಯಾಂಪ್ಸ್ ಸಹಕಾರ ಮಹಾಮಂಡಳ ಹಾಗೂ ಲ್ಯಾಂಪ್ಸ್ ಸಂಘಗಳಿಗೆ ಮೂಲಭೂತ ಸೌಕರ್ಯಗಳಾದ ಕಂಪ್ಯೂಟರ್ ಗಳು, ಫ್ಯಾಕ್ಸ್, ಟೆಲಿಪೋನ್ ಗಳನ್ನು ಒದಗಿಸುವುದು. ಅಂದಾಜು ಫಲಿತಾಂಶ: ಮೂಲಭೂತ ಸೌಕರ್ಯ ಒದಗಿಸುವುದರಿಂಧ ಲ್ಯಾಂಪ್ಸ್ ಸಹಕಾರ ಸಂಘಗಳ ಸದಸ್ಯರು ಸಂಗ್ರಹಿಸಿದ ಕಿರು ಅರಣ್ಯ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಸೌಲಭ್ಯ ದೊರಕಿ ಅವರು ಆರ್ಥಿಕವಾಗಿ ಲಾಭ ಪಡೆಯುತ್ತಾರೆ. ಯಶಸ್ವಿನಿ ಆಯವ್ಯಯ ಅವಕಾಶ ( ಗ್ರಾಮೀಣ ) : ರೂ. 9901/- ಲಕ್ಷಗಳು ಆಯವ್ಯಯ ಅವಕಾಶ ( ನಗರ) : ರೂ.1100/- ಲಕ್ಷಗಳು ಆರ್ಥಿಕ ಸಹಾಯದ ವಿಧ: ಸಹಾಯಧನ ಯೋಜನೆಯ ಉದ್ದೇಶ: ಸಹಕಾರಿಗಳಲ್ಲಿ ಆರೋಗ್ಯ ನಿಗಾದ ಗುಣಮಟ್ಟವನ್ನು ವೃದ್ಧಿಸುವುದು ಹಾಗೂ ಆ ಮೂಲಕ ಅವರ ಜೀವನ ಮಟ್ಟವನ್ನು ಸುಧಾರಿಸುವುದು, ತನ್ಮೂಲಕ ಸಹಕಾರಿ ಸದಸ್ಯರ ಒಟ್ಟಾರೆ ಆರೋಗ್ಯ ಮತ್ತು ಕ್ಷೇಮ ಇರುವಂತೆ ನೋಡಿಕೊಳ್ಳುವುದು. 2014-15 ನೇ ಸಾಲಿನಲ್ಲಿ ಈ ಯೋಜನೆಯನ್ನು ನಗರ ಪ್ರದೇಶಗಳಿಗೆ ವಿಸ್ತರಿಸಲಾಗಿದೆ. ಅಂದಾಜು ಫಲಿತಾಂಶ: ಗ್ರಾಮೀಣ ಸಹಕಾರಿಗಳಿಗೆ 476 ನೆಟ್ ವರ್ಕ್ ಆಸ್ಪತ್ರೆಗಳ ಮೂಲಕ ಸುಮಾರು 823 ವಿವಿಧ ರೀತಿಯ ಶಸ್ತ್ರ ಚಿಕಿತ್ಸಾ ಸೌಲಭ್ಯವನ್ನು ಉಚಿತವಾಗಿ ದೊರಕಿಸುವುದರಿಂದ ಅವರ ಆರೋಗ್ಯ ಮತ್ತು ಜೀವನ ಮಟ್ಟದಲ್ಲಿ ಸುಧಾರಣೆ ಉಂಟಾಗಲು ಸಹಾಯಕವಾಗುತ್ತದೆ. ಹಣಕಾಸು ಸಹಾಯ ಪರಿಶಿಷ್ಠ ಜಾತಿ/ಪರಿಶಿಷ್ಠ ಪಂಗಡ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಸಹಕಾರ ಸಂಘಗಳಿಗೆ ಹಣಕಾಸು ಸಹಾಯ, ಆಯವ್ಯಯ ಅವಕಾಶ : ರೂ.11.00 ಲಕ್ಷಗಳು ಆರ್ಥಿಕ ಸಹಾಯದ ವಿಧ: ಸಹಾಯಧನ ಯೋಜನೆಯ ಉದ್ದೇಶ: ಈ ಯೋಜನೆಯಡಿ ಪರಿಶಿಷ್ಠ ಜಾತಿ/ಪರಿಶಿಷ್ಠ ಪಂಗಡ/ಹಿಂದುಳಿದ ವರ್ಗ/ಅಲ್ಪಸಂಖ್ಯಾತರ ಸಹಕಾರ ಸಂಘಗಳಿಗೆ ಮೂಲಭೂತ ಸೌಕರ್ಯ ಹೊಂದಲು / ಆಸ್ತಿ ನಿರ್ಮಾಣ ಮಾಡಿಕೊಳ್ಳಲುಹಣಕಾಸು ಸಹಾಯ ನೀಡಲಾಗುವುದು. ಅಂದಾಜು ಫಲಿತಾಂಶ : ಫಲಾನುಭವಿ ಸಹಕಾರ ಸಂಘಗಳಲ್ಲಿ ಮೂಲಭೂತ ಸೌಕರ್ಯ/ಆಸ್ತಿ ನಿರ್ಮಾಣವಾಗುವುದರಿಂಧ ಸಂಘಗಳ ವ್ಯವಹಾರ ಹೆಚ್ಚಿ ಉದ್ದೇಶಗಳು ಈಡೇರಲು ಸಾಧ್ಯವಾಗುತ್ತದೆ. ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳಿಂದ ಕೊಳವೆ ಬಾವಿಗಳಿಗಾಗಿ ನೀಡಿದ ಸಾಲ ಮನ್ನಾ : ಆಯವ್ಯಯ ಅವಕಾಶ: ರೂ.200.00 ಲಕ್ಷಗಳು ಆರ್ಥಿಕ ಸಹಾಯದ ವಿಧ: ಸಹಾಯಧನ ಯೋಜನೆಯ ಉದ್ದೇಶ: ಪಿಕಾರ್ಡ್ ಬ್ಯಾಂಕ್ಗಳಿಂದ ಕೊಳವೆ ಬಾವಿಗಳನ್ನು ತೆರೆಯಲು ಸಾಲ ಪಡೆದು ನಂತರ ಸುಸ್ತಿಯಾದ ರೈತರ ಸಾಲಮನ್ನಾ ಮಾಡಲು ಉದ್ದೇಶಿಸಿಲಾಗಿದೆ. ಅಂದಾಜು ಫಲಿತಾಂಶ: ಸುಸ್ತಿ ಸಾಲವನ್ನು ಮನ್ನಾ ಮಾಡುವುದರಿಂದ ರೈತರು ರಿಯಾಯಿತಿ ದರದಲ್ಲಿ ಹೊಸ ಸಾಲ ಪಡೆಯಲು ಅನುಕೂಲವಾಗುತ್ತದೆ.. ಸ್ವಸಹಾಯ ವರ್ಗಗಳಿಗೆ ಸಾಲಗಳ ಮೇಲಣ ಬಡ್ಡಿ ಸಹಾಯಧನ: ಆಯವ್ಯಯ ಅವಕಾಶ: ರೂ. 8600.00 ಲಕ್ಷಗಳು ಆರ್ಥಿಕ ಸಹಾಯದ ವಿಧ: ಸಹಾಯಧನ ಯೋಜನೆಯ ಉದ್ದೇಶ: ಸ್ವಸಹಾಯ ಗುಂಪುಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರವನ್ನು ಶೇ.4 ಕ್ಕೆ ಇಳಿಸುವುದು ಹಾಗೂ ಸರ್ಕಾರದ ಬದ್ಧತೆಯಂತೆ ಸಹಕಾರ ಸಂಘಗಳಿಂದ ಮಂಜೂರಾಗುವ ಸಾಲದ ಮೇಲೆ ಬಡ್ಡಿ ಸಹಾಯಧನವನ್ನು ಒದಗಿಸುವುದು. ಅಂದಾಜು ಫಲಿತಾಂಶ: ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದ ಸದಸ್ಯರಿಗೆ ಹಾಗೂ ಮಹಿಳೆಯರಿಗೆ ಆರ್ಥಿಕ ಸಂಸ್ಥೆಗಳ ಮೂಲಕ ಸಾಲ ದೊರೆಯಲು ಸಹಾಯವಾಗುತ್ತದೆ. ಪರಿಶಿಷ್ಠ ಜಾತಿ/ಪರಿಶಿಷ್ಠ ಪಂಗಡ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಸಹಕಾರ ಸಂಘಗಳಿಗೆ ಹಣಕಾಸು ಸಹಾಯ, ಸಹಾಯಧನ ವಿವಿಧ ಸಹಕಾರ ಸಂಸ್ಥೆಗಳಲ್ಲಿ ಬಿಪಿಎಲ್, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಮತ್ತು ಅಲ್ಪಸಂಖ್ಯಾತರು, ಮಹಿಳೆಯರು, ಅಂಗವಿಕಲರನ್ನು ಸದಸ್ಯರನ್ನಾಗಿ ನೋಂದಾಯಿಸುವ ಬಗ್ಗೆ ಸಹಾಯಧನ : ಆಯವ್ಯಯ ಅವಕಾಶ: ರೂ3200.00 ಲಕ್ಷಗಳು ಆರ್ಥಿಕ ಸಹಾಯದ ವಿಧ: ಸಹಾಯಧನ ಯೋಜನೆಯ ಉದ್ದೇಶ: ಯೋಜನೆಯ ಪ್ರಮುಖ ಉದ್ದೇಶ ಬಿಪಿಎಲ್, ಪರಿಶಿಷ್ಠ ಜಾತಿ/ಪರಿಶಿಷ್ಠ ಪಂಗಡ/ಹಿಂದುಳಿದ ವರ್ಗ/ಅಲ್ಪಸಂಖ್ಯಾತ ವರ್ಗದ ಜನರನ್ನು ಎಲ್ಲಾ ವಿಧದ ಸಹಕಾರ ಸಂಘಗಳಿಗೆ ಸದಸ್ಯರನ್ನಾಗಿ ನೋಂದಾಯಿಸಲು ಸಹಾಯಧನ ನೀಡುವುದು ಆ ಮೂಲಕ ಆಯಾ ಸಹಕಾರ ಸಂಘಗಳಿಂದ ದೊರಕುವ ಸೌಲಭ್ಯವನ್ನು ಅವರಿಗೆ ಒದಗಿಸುವುದು. ಆಯಾ ಸಂಘದ ಒಂದು ಷೇರಿನ ಮೊತ್ತ ಅಥವಾ ಗರಿಷ್ಠ ರೂ.500/- ಇವುಗಳ ಪೈಕಿ ಯಾವುದು ಕಡಿಮೆಯೋ ಅಷ್ಟು ಮೊತ್ತವನ್ನು ಮಂಜೂರು ಮಾಡುವುದು. ಅಂದಾಜು ಫಲಿತಾಂಶ: ಬಿಪಿಎಲ್, ಪರಿಶಿಷ್ಠ ಜಾತಿ/ಪರಿಶಿಷ್ಠ ಪಂಗಡ/ಹಿಂದುಳಿದ ವರ್ಗ/ಅಲ್ಪಸಂಖ್ಯಾತ ವರ್ಗದ ಜನರನ್ನು ಎಲ್ಲಾ ವಿಧದ ಸಹಕಾರ ಸಂಘಗಳಲ್ಲಿ ಸದಸ್ಯರನ್ನಾಗಿ ನೋಂದಾಯಿಸುವ ಮೂಲಕ ಆಯಾ ಸಹಕಾರ ಸಂಘಗಳಲ್ಲಿದೊರೆಯುವ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಅವರು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದುವರು. ವಿವಿಧ ಸಹಕಾರ ಸಂಸ್ಥೆಗಳಲ್ಲಿ ಬಿಪಿಎಲ್, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಮತ್ತು ಅಲ್ಪಸಂಖ್ಯಾತರು, ಮಹಿಳೆಯರು, ಅಂಗವಿಕಲರನ್ನು ಸದಸ್ಯರನ್ನಾಗಿ ನೋಂದಾಯಿಸುವ ಬಗ್ಗೆ ಸಹಾಯಧನ :ಆಯವ್ಯಯ ಅವಕಾಶ: ರೂ3200.00 ಲಕ್ಷಗಳು ಆರ್ಥಿಕ ಸಹಾಯದ ವಿಧ: ಸಹಾಯಧನ ಯೋಜನೆಯ ಉದ್ದೇಶ: ಯೋಜನೆಯ ಪ್ರಮುಖ ಉದ್ದೇಶ ಬಿಪಿಎಲ್, ಪರಿಶಿಷ್ಠ ಜಾತಿ/ಪರಿಶಿಷ್ಠ ಪಂಗಡ/ಹಿಂದುಳಿದ ವರ್ಗ/ಅಲ್ಪಸಂಖ್ಯಾತ ವರ್ಗದ ಜನರನ್ನು ಎಲ್ಲಾ ವಿಧದ ಸಹಕಾರ ಸಂಘಗಳಿಗೆ ಸದಸ್ಯರನ್ನಾಗಿ ನೋಂದಾಯಿಸಲು ಸಹಾಯಧನ ನೀಡುವುದು ಆ ಮೂಲಕ ಆಯಾ ಸಹಕಾರ ಸಂಘಗಳಿಂದ ದೊರಕುವ ಸೌಲಭ್ಯವನ್ನು ಅವರಿಗೆ ಒದಗಿಸುವುದು. ಆಯಾ ಸಂಘದ ಒಂದು ಷೇರಿನ ಮೊತ್ತ ಅಥವಾ ಗರಿಷ್ಠ ರೂ.500/- ಇವುಗಳ ಪೈಕಿ ಯಾವುದು ಕಡಿಮೆಯೋ ಅಷ್ಟು ಮೊತ್ತವನ್ನು ಮಂಜೂರು ಮಾಡುವುದು. ಅಂದಾಜು ಫಲಿತಾಂಶ: ಬಿಪಿಎಲ್, ಪರಿಶಿಷ್ಠ ಜಾತಿ/ಪರಿಶಿಷ್ಠ ಪಂಗಡ/ಹಿಂದುಳಿದ ವರ್ಗ/ಅಲ್ಪಸಂಖ್ಯಾತ ವರ್ಗದ ಜನರನ್ನು ಎಲ್ಲಾ ವಿಧದ ಸಹಕಾರ ಸಂಘಗಳಲ್ಲಿ ಸದಸ್ಯರನ್ನಾಗಿ ನೋಂದಾಯಿಸುವ ಮೂಲಕ ಆಯಾ ಸಹಕಾರ ಸಂಘಗಳಲ್ಲಿದೊರೆಯುವ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಅವರು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದುವರು. ಬ್ಯಾಂಕ್ ಗೆ ಸಾಲ ಕರ್ನಾಟಕ ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವ್ಥದ್ಧಿ ಬ್ಯಾಂಕ್ ಗೆ ಸಾಲ ಆಯವ್ಯಯ ಅವಕಾಶ: ರೂ.500.00 ಲಕ್ಷಗಳು ಆರ್ಥಿಕ ಸಹಾಯದ ವಿಧ: ಸಾಲ ಯೋಜನೆಯ ಉದ್ದೇಶ: ಕಸ್ಕಾರ್ಡ್ ಬ್ಯಾಂಕ್ ಗೆ ಅವಧಿ ಸಾಲವನ್ನು ವಿಸ್ತರಿಸಿ, ಆ ಮೂಲಕ ಪಿಕಾರ್ಡ್ ಬ್ಯಾಂಕ್ಗಳಿಗೆ ಸಾಲ ದೊರೆಯುವಂತಾಗಲು, ರಾಜ್ಯ ಸರ್ಕಾರದ ಶೇ. 4-5ರ ಪಾಲನ್ನು ಭರಿಸುವುದು. ಅಂದಾಜು ಫಲಿತಾಂಶ: ನಬಾರ್ಡ್ ನಿಂದ ಕರ್ನಾಟಕ ರಾಜ್ಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಪುನರ್ಧನ ಸೌಲಭ್ಯ ಪಡೆಯುತ್ತದೆ. ಇದರಿಂದಾಗಿ ಸಕಾಲದಲ್ಲಿ ರೈತರಿಗೆ ಸುಲಭ ದರದಲ್ಲಿ ದೀರ್ಘಾವಧಿ ಸಾಲ ನೀಡಲು ಅವಕಾಶವಾಗುತ್ತದೆ ಹಾಗೂ ಆ ಮೂಲಕ ರೈತರ ಜೀವನ ಮಟ್ಟ ಸುಧಾರಿಸುತ್ತದೆ. ಬಂಡವಾಳ ನೆರವು, ಅಲ್ಪಾವಧಿ ಸಾಲ ಆರ್ಥಿಕವಾಗಿ ದುರ್ಬಲವಾಗಿರುವ ಗ್ರಾಹಕರ, ಮಾರುಕಟ್ಟೆ ಮತ್ತು ಸಂಸ್ಕರಣಾ ಸಹಕಾರ ಸಂಘಗಳಿಗೆ ಬಂಡವಾಳ ನೆರವು : ಆಯವ್ಯಯ ಅವಕಾಶ: ರೂ.140.00 ಲಕ್ಷಗಳು ಆರ್ಥಿಕ ಸಹಾಯದ ವಿಧ: ಷೇರು ಬಂಡವಾಳ ಯೋಜನೆಯ ಉದ್ದೇಶ: ಇದು 2012-13 ನೇ ಸಾಲಿನಲ್ಲಿ ಪ್ರಾರಂಭವಾಗಿರುವ ಯೋಜನೆಯಾಗಿರುತ್ತದೆ. ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಹಕ ರ ಮಾರುಕಟ್ಟೆ ಮತ್ತು ಸಂಸ್ಕರಣ ಸಹಕಾರ ಸಂಘಗಳು ಆರ್ಥಿಕವಾಗಿ ದುರ್ಬಲವಾಗಿದ್ದು, ಅವುಗಳು ಬೈಲಾ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಸಶಕ್ತವಾಗಿಲ್ಲದ ಕಾರಣಅಂತಹ ಸಹಕಾರ ಸಂಘಗಳಿಗೆ ಆರ್ಥಿಕ ನೆರವನ್ನು ಷೇರು ಬಂಡವಾಳದ ರೂಪದಲ್ಲಿಒದಗಿಸುವುದು. ಅಂದಾಜು ಫಲಿತಾಂಶ: ಆರ್ಥಿಕ ನೆರವು ಪಡೆದ ಸಹಕಾರ ಸಂಘಗಳು ಮೂಲ ಬಂಡವಾಳವನ್ನು ಹೆಚ್ಚಿಸಿಕೊಂಡು ವ್ಯವಹಾರಗಳನ್ನು ಮಾಡಿ, ಆರ್ಥಿಕವಾಗಿ ಸದೃಢವಾಗುತ್ತವೆ. 12. ಒಳನಾಡು ಮೀನುಗಾರಿಕೆಯಲ್ಲಿ -ಸಹಕಾರಿ ಬ್ಯಾಂಕುಗಳ ಮೂಲಕ ಅಲ್ಪಾವಧಿ ಸಾಲ. . ಆಯವ್ಯಯ ಅವಕಾಶ: ರೂ.240.00 ಲಕ್ಷಗಳು ಆರ್ಥಿಕ ಸಹಾಯದ ವಿಧ: ಸಹಾಯಧನ ಯೋಜನೆಯ ಉದ್ದೇಶ: ಒಳನಾಡು ಮೀನುಗಾರಿಕೆಯಲ್ಲಿ ನೀಲಿಕ್ರಾಂತಿ ತರಲು ರಾಜ್ಯದ ಒಳನಾಡು ಮೀನು ಕೃಷಿಕರಿಗೆ ಸಹಕಾರಿ ಬ್ಯಾಂಕುಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ 1 ಲಕ್ಷ ರೂ.ವರೆಗಿನ ಅಲ್ಪಾವಧಿ ಸಾಲ ನೀಡಲಾಗುವುದು. ಅಂದಾಜು ಫಲಿತಾಂಶ: ಸಾಲದ ವ್ಯವಸ್ಥೆಯನ್ನು ಒಳನಾಡು ಮೀನುಗಾರಿಕೆ ಬಲಗೊಳಿಸಿ ಸಾಲವು ಸುಲಭ ದರದಲ್ಲಿ ದೊರೆಯುವಂತೆ ಮಾಡುವುದು. ಆರ್ಥಿಕವಾಗಿ ದುರ್ಬಲವಾಗಿರುವ ಗ್ರಾಹಕರ, ಮಾರುಕಟ್ಟೆ ಮತ್ತು ಸಂಸ್ಕರಣಾ ಸಹಕಾರ ಸಂಘಗಳಿಗೆ ಬಂಡವಾಳ ನೆರವು :ಆಯವ್ಯಯ ಅವಕಾಶ: ರೂ.140.00 ಲಕ್ಷಗಳುಆರ್ಥಿಕ ಸಹಾಯದ ವಿಧ: ಷೇರು ಬಂಡವಾಳ ಯೋಜನೆಯ ಉದ್ದೇಶ: ಇದು 2012-13 ನೇ ಸಾಲಿನಲ್ಲಿ ಪ್ರಾರಂಭವಾಗಿರುವ ಯೋಜನೆಯಾಗಿರುತ್ತದೆ. ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಹಕ ರ ಮಾರುಕಟ್ಟೆ ಮತ್ತು ಸಂಸ್ಕರಣ ಸಹಕಾರ ಸಂಘಗಳು ಆರ್ಥಿಕವಾಗಿ ದುರ್ಬಲವಾಗಿದ್ದು, ಅವುಗಳು ಬೈಲಾ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಸಶಕ್ತವಾಗಿಲ್ಲದ ಕಾರಣಅಂತಹ ಸಹಕಾರ ಸಂಘಗಳಿಗೆ ಆರ್ಥಿಕ ನೆರವನ್ನು ಷೇರು ಬಂಡವಾಳದ ರೂಪದಲ್ಲಿಒದಗಿಸುವುದು. ಅಂದಾಜು ಫಲಿತಾಂಶ: ಆರ್ಥಿಕ ನೆರವು ಪಡೆದ ಸಹಕಾರ ಸಂಘಗಳು ಮೂಲ ಬಂಡವಾಳವನ್ನು ಹೆಚ್ಚಿಸಿಕೊಂಡು ವ್ಯವಹಾರಗಳನ್ನು ಮಾಡಿ, ಆರ್ಥಿಕವಾಗಿ ಸದೃಢವಾಗುತ್ತವೆ. ಒಳನಾಡು ಮೀನುಗಾರಿಕೆಯಲ್ಲಿ -ಸಹಕಾರಿ ಬ್ಯಾಂಕುಗಳ ಮೂಲಕ ಅಲ್ಪಾವಧಿ ಸಾಲ. .ಆಯವ್ಯಯ ಅವಕಾಶ: ರೂ.240.00 ಲಕ್ಷಗಳು ಆರ್ಥಿಕ ಸಹಾಯದ ವಿಧ: ಸಹಾಯಧನ ಯೋಜನೆಯ ಉದ್ದೇಶ: ಒಳನಾಡು ಮೀನುಗಾರಿಕೆಯಲ್ಲಿ ನೀಲಿಕ್ರಾಂತಿ ತರಲು ರಾಜ್ಯದ ಒಳನಾಡು ಮೀನು ಕೃಷಿಕರಿಗೆ ಸಹಕಾರಿ ಬ್ಯಾಂಕುಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ 1 ಲಕ್ಷ ರೂ.ವರೆಗಿನ ಅಲ್ಪಾವಧಿ ಸಾಲ ನೀಡಲಾಗುವುದು. ಅಂದಾಜು ಫಲಿತಾಂಶ: ಸಾಲದ ವ್ಯವಸ್ಥೆಯನ್ನು ಒಳನಾಡು ಮೀನುಗಾರಿಕೆ ಬಲಗೊಳಿಸಿ ಸಾಲವು ಸುಲಭ ದರದಲ್ಲಿ ದೊರೆಯುವಂತೆ ಮಾಡುವುದು. ಪಶು ಭಾಗ್ಯ ಪಶು ಭಾಗ್ಯ” -ಪಶುಸಂಗೋಪನೆ ಇಲಾಖೆ -ಸಹಕಾರಿ ಬ್ಯಾಂಕುಗಳ ಮೂಲಕ ಅಲ್ಪಾವಧಿ ಸಾಲ. ಆಯವ್ಯಯ ಅವಕಾಶ : ರೂ. 1560.00 ಲಕ್ಷಗಳು ಯೋಜನೆಯ ಉದ್ದೇಶ : “ಪಶು ಭಾಗ್ಯ” ಯೋಜನೆಯಡಿಯಲ್ಲಿ ಸಹಕಾರಿ ಬ್ಯಾಂಕುಗಳಿಂದ ಶೂನ್ಯ ಬಡ್ಡಿ ದರದಲ್ಲಿ ರೂ. 50,000 ವರೆಗೆ ಪಶು ಆಹಾರ / ಇತರೆ ನಿರ್ವಹಣೆ ವೆಚ್ಚಕ್ಕಾಗಿ ಅಲ್ಪಾವಧಿ ಸಾಲ ಒದಗಿಸಲಾಗುವುದು. ಅಂದಾಜು ಫಲಿತಾಂಶ: ಪಶು ಆಹಾರ / ಇತರೆ ನಿರ್ವಹಣೆ ವೆಚ್ಚಕ್ಕಾಗಿ ಶೂನ್ಯ ಬಡ್ಡಿ ದರದಲ್ಲಿ ಅಲ್ಪಾವಧಿ ಸಾಲ ದೊರೆಯುವಂತೆ ಮಾಡುವುದು. ಪಶು ಭಾಗ್ಯ” -ಪಶುಸಂಗೋಪನೆ ಇಲಾಖೆ -ಸಹಕಾರಿ ಬ್ಯಾಂಕುಗಳ ಮೂಲಕ ಅಲ್ಪಾವಧಿ ಸಾಲ.ಆಯವ್ಯಯ ಅವಕಾಶ : ರೂ. 1560.00 ಲಕ್ಷಗಳು ಯೋಜನೆಯ ಉದ್ದೇಶ : “ಪಶು ಭಾಗ್ಯ” ಯೋಜನೆಯಡಿಯಲ್ಲಿ ಸಹಕಾರಿ ಬ್ಯಾಂಕುಗಳಿಂದ ಶೂನ್ಯ ಬಡ್ಡಿ ದರದಲ್ಲಿ ರೂ. 50,000 ವರೆಗೆ ಪಶು ಆಹಾರ / ಇತರೆ ನಿರ್ವಹಣೆ ವೆಚ್ಚಕ್ಕಾಗಿ ಅಲ್ಪಾವಧಿ ಸಾಲ ಒದಗಿಸಲಾಗುವುದು. ಅಂದಾಜು ಫಲಿತಾಂಶ: ಪಶು ಆಹಾರ / ಇತರೆ ನಿರ್ವಹಣೆ ವೆಚ್ಚಕ್ಕಾಗಿ ಶೂನ್ಯ ಬಡ್ಡಿ ದರದಲ್ಲಿ ಅಲ್ಪಾವಧಿ ಸಾಲ ದೊರೆಯುವಂತೆ ಮಾಡುವುದು. ಗೋದಾಮು ನಿರ್ಮಾಣ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವ (ಪಿ.ಪಿ.ಪಿ) ಮಾದರಿಯಲ್ಲಿ ಪ್ತಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಗೋದಾಮು ನಿರ್ಮಾಣ : ಆಯವ್ಯಯ ಅವಕಾಶ: ರೂ.500.00 ಲಕ್ಷಗಳು ಯೋಜನೆಯ ಉದ್ದೇಶ: ಖಾಸಗಿ ಮತ್ತು ಸಾರ್ವಜನಿಕ ವಲಯಗಳ ಸಹಭಾಗಿತ್ವದಲ್ಲಿ ಗೋದಾಮು ಹೊಂದಿಲ್ಲದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಗೋದಾಮು ನಿರ್ಮಾಣ ಮಾಡುವ ಉದ್ದೇಶವನ್ನು ಹೊಂದಿದೆ. ಅಂದಾಜು ಫಲಿತಾಂಶ: ಗೋದಾಮು ಶೇಖರಣೆ ಸಾಮಥ್ರ್ಯ ಹೆಚ್ಚಿಸುವುದರಿಂದ ರೈತರು ಬೆಳೆದ ಉತ್ಪನ್ನಗಳನ್ನು ವೈಜ್ಞಾನಿಕವಾಗಿ ಶೇಖರಿಸಲು ಸಹಾಯವಾಗುವುದು. ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವ (ಪಿ.ಪಿ.ಪಿ) ಮಾದರಿಯಲ್ಲಿ ಪ್ತಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಗೋದಾಮು ನಿರ್ಮಾಣ :ಆಯವ್ಯಯ ಅವಕಾಶ: ರೂ.500.00 ಲಕ್ಷಗಳು ಯೋಜನೆಯ ಉದ್ದೇಶ: ಖಾಸಗಿ ಮತ್ತು ಸಾರ್ವಜನಿಕ ವಲಯಗಳ ಸಹಭಾಗಿತ್ವದಲ್ಲಿ ಗೋದಾಮು ಹೊಂದಿಲ್ಲದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಗೋದಾಮು ನಿರ್ಮಾಣ ಮಾಡುವ ಉದ್ದೇಶವನ್ನು ಹೊಂದಿದೆ. ಅಂದಾಜು ಫಲಿತಾಂಶ: ಗೋದಾಮು ಶೇಖರಣೆ ಸಾಮಥ್ರ್ಯ ಹೆಚ್ಚಿಸುವುದರಿಂದ ರೈತರು ಬೆಳೆದ ಉತ್ಪನ್ನಗಳನ್ನು ವೈಜ್ಞಾನಿಕವಾಗಿ ಶೇಖರಿಸಲು ಸಹಾಯವಾಗುವುದು. ತರಬೇತಿ ಕೇಂದ್ರಗಳ ಕಟ್ಟಡ ನಿರ್ಮಾಣ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ನಿ., ಬೆಂಗಳೂರು, ತರಬೇತಿ ಕೇಂದ್ರಗಳ ಕಟ್ಟಡ ನಿರ್ಮಾಣ : ಆಯವ್ಯಯ ಅವಕಾಶ: ರೂ..60.00 ಲಕ್ಷಗಳು ಆರ್ಥಿಕ ಸಹಾಯದ ವಿಧ: ಷೇರು ಬಂಡವಾಳ ಯೋಜನೆಯ ಉದ್ದೇಶ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ರವರ ಆಡಳಿತದಲ್ಲಿ ಮೂರು ತರಬೇತಿ ಕೇಂದ್ರಗಳ ( ಬೆಳಗಾವಿ, ಧಾರವಾಡ, ಬೆಂಗಳೂರು) ಕಟ್ಟಡಗಳನ್ನು ನಿರ್ಮಿಸುವುದು. ಅಂದಾಜು ಫಲಿತಾಂಶ: ತರಬೇತಿ ಕೇಂದ್ರಗಳ ನಿರ್ಮಾಣದಿಂದ ತರಬೇತಿ ಶಿಕ್ಷಣವನ್ನು ಪರಿಣಾಮಕಾರಿಗೊಳಿಸಲು ಸರ್ಕಾರದ ಸಹಾಯಧನ . ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ನಿ., ಬೆಂಗಳೂರು, ತರಬೇತಿ ಕೇಂದ್ರಗಳ ಕಟ್ಟಡ ನಿರ್ಮಾಣ :ಆಯವ್ಯಯ ಅವಕಾಶ: ರೂ..60.00 ಲಕ್ಷಗಳು ಆರ್ಥಿಕ ಸಹಾಯದ ವಿಧ: ಷೇರು ಬಂಡವಾಳ ಯೋಜನೆಯ ಉದ್ದೇಶ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ರವರ ಆಡಳಿತದಲ್ಲಿ ಮೂರು ತರಬೇತಿ ಕೇಂದ್ರಗಳ ( ಬೆಳಗಾವಿ, ಧಾರವಾಡ, ಬೆಂಗಳೂರು) ಕಟ್ಟಡಗಳನ್ನು ನಿರ್ಮಿಸುವುದು. ಅಂದಾಜು ಫಲಿತಾಂಶ: ತರಬೇತಿ ಕೇಂದ್ರಗಳ ನಿರ್ಮಾಣದಿಂದ ತರಬೇತಿ ಶಿಕ್ಷಣವನ್ನು ಪರಿಣಾಮಕಾರಿಗೊಳಿಸಲು ಸರ್ಕಾರದ ಸಹಾಯಧನ ಗಣೀಕಿಕರಣಗೊಳಿಸಲು ಸಹಾಯಧನ ಸ್ವಸಹಾಯ ಗುಂಪುಗಳಿಗೆ ಗಣಕಯಂತ್ರ ಒದಗಿಸಿ ಗಣೀಕಿಕರಣಗೊಳಿಸಲು ಹಾಗೂ ಪ್ಯಾಕ್ಸ್ಗಳಿಗೆ ತಂತ್ರಾಂಶ ಒದಗಿಸಲು ಸರ್ಕಾರದ ಸಹಾಯಧನ : ಆಯವ್ಯಯ ಅವಕಾಶ: ರೂ 245.00 ಲಕ್ಷಗಳು ಆರ್ಥಿಕ ಸಹಾಯದ ವಿಧ: ಷೇರು ಬಂಡವಾಳ ಯೋಜನೆಯ ಉದ್ದೇಶ: ಸ್ವಸಹಾಯ ಗುಂಪುಗಳು ಹಾಗೂ ಪ್ಯಾಕ್ಸ್ಗಳಿಗೆ ಗಣಕೀಕರಣಗೊಳಿಸಲು ಅವಶ್ಯಕವಿರುವ ತಂತ್ರಾಂಶವನ್ನು ಒದಗಿಸಿ ಸಬಲೀಕರಣಗೊಳಿಸುವುದು. ಅಂದಾಜು ಫಲಿತಾಂಶ: ಸ್ವಸಹಾಯ ಗುಂಪುಗಳು ಹಾಗೂ ಪ್ಯಾಕ್ಸ್ಗಳಿಗೆ ಗಣಕೀಕರಣಗೊಳಿಸಿರುವುದರಿಂದ ಬಿಲ್ಲುಗಳನ್ನು ನಿಗಧಿತ ಸಮಯದಲ್ಲಿ ತಯಾರಿಸಲು ಸಾಧ್ಯವಾಗುವುದು ಹಾಗೂ ನಿಖರವಾದ ಮಾಹಿತಿಯನ್ನು ತಯಾರಿಸಲು ಸಾಧ್ಯವಾಗುವುದು. ಪ್ರಾಥಮಿಕ ಮೌಲ್ಯವರ್ಧನ ಘಟಕ ಯೋಜನೆ ಆಯವ್ಯಯ ಅವಕಾಶ: ರೂ.300.00 ಲಕ್ಷಗಳು ಯೋಜನೆಯ ಉದ್ದೇಶ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಕೃಷಿ ಉತ್ಪನ್ನಗಳ ಪ್ರಾಥಮಿಕ ಮೌಲ್ಯವರ್ಧನೆ, ಮತ್ತು ಶೇಖರಿಣೆ, ಶುದ್ಧೀಕರಣ, ವರ್ಗಿಕರಣ ಮಾಡಲು ಅವಶ್ಯಕವಾದ ಕ್ಲೀನಿಂಗ್ ಮತ್ತು ಗ್ರೇಡಿಂಗ್ ಯಂತ್ರೋಪಕರಣಗಳನ್ನು ಪ್ರಥಮ ಹಂತದಲ್ಲಿ ಒದಗಿಸಿ ರೈತರಿಗೆ ನೆರವಾಗುವ ಉದ್ದೇಶವನ್ನು ಹೊಂದಲಾಗಿದೆ. ಅಂದಾಜು ಫಲಿತಾಂಶ: ಕೃಷಿ ಉತ್ಪನ್ನಗಳ ಗುಣಮಟ್ಟ ಸುಧಾರಿಸಿ, ಉತ್ತಮ ಬೆಲೆ ಪಡೆಯಲು ಅನುವಾಗುವಂತೆ ಇವುಗಳ ಮೌಲ್ಯವರ್ಧನೆಯಾಗಿ ರೈತರಿಗೆ ಉತ್ತಮ ಬೆಲೆ ಲಭ್ಯವಾಗುತ್ತದೆ.ಪ್ರಥಮ ಹಂತದಲ್ಲಿ ತಲಾ ರೂ 10 ಲಕ್ಷದಂತೆ 100 ಸಹಕಾರ ಸಂಘಗಳಿಗೆ ಸೌಲಭ್ಯ ಒದಗಿಸುವುದು. ಬ್ಯಾಂಕ್ಗಳಿಗೆ ಸಾಲ, ಚುನಾವಣಾ ಪ್ರಾಧಿಕಾರ ದುರ್ಬಲ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ಗಳಿಗೆ ಸಾಲ ಆಯವ್ಯಯ ಅವಕಾಶ: ರೂ.500.00 ಲಕ್ಷಗಳು ಯೋಜನೆಯ ಉದ್ದೇಶ: ದುರ್ಬಲ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ಗಳಿಗೆ ಸಾಲದ ರೂಪದಲ್ಲಿ ಸಹಾಯಧನ ಒದಗಿಸಿ ಬ್ಯಾಂಕುಗಳ ಪುನಃಶ್ಚೇತನಕ್ಕೆ ಸಹಾಯ ಮಾಡುವ ಉದ್ದೇಶವನ್ನು ಹೊಂದಿದೆ. ಅಂದಾಜು ಫಲಿತಾಂಶ: ಆಯಾ ಜಿಲ್ಲೆಗಳ ರೈತರ ಸಾಲದ ಅವಶ್ಯಕತೆಯನ್ನು ಪೂರೈಸಲು ಅನುವಾಗುವುದು. . ಕೇಂದ್ರ ಸಹಕಾರ ಬ್ಯಾಂಕ್ಗಳಿಗೆ ಸಾಲ ಆಯವ್ಯಯ ಅವಕಾಶ: ರೂ200.00 ಲಕ್ಷಗಳು ಯೋಜನೆಯ ಉದ್ದೇಶ: 97 ನೇಯ ಸಂವಿಧಾನದ ತಿದ್ದುಪಡಿಯ ಹಿನ್ನಲೆಯಲ್ಲಿ ಸಹಕಾರ ಚುನಾವಣಾ ಆಯೋಗವನ್ನು ರಚಿಸಲಾಗಿದೆ. ರಾಜ್ಯದಲ್ಲಿನ ಸಹಕಾರ ಸಂಗಗಳಿಗೆ ನಡೆಯುವ ಎಲ್ಲಾ ಚುನಾವಣೆಗಳನ್ನು ನಡೆಸುವ ಮತ್ತು ತತ್ಸಂಬಂಧತ ಮತದಾರರ ಪಟ್ಟಿಗಳನ್ನು ತಯಾರಿಸುವ ಕಾರ್ಯದ ಅಧೀಕ್ಷಣೆ, ನಿರ್ದೇಶನ ಮತ್ತು ನಿಯಂತ್ರಣವು ಸಹಕಾರ ಚುನಾವಣಾ ಆಯೋಗದಲ್ಲಿ ನಿಹಿತವಾಗಿರುತ್ತದೆ. ಅಂದಾಜು ಫಲಿತಾಂಶ : ರಾಜ್ಯದಲ್ಲಿನ ಸಹಕಾರ ಸಂಘಗಳಿಗೆ ನಡೆಯುವ ಎಲ್ಲಾ ಚುನಾವಣೆಗಳನ್ನು ನಡೆಸುವ ಮತ್ತು ತತ್ಸಂಬಂಧತ ಮತದಾರರ ಪಟ್ಟಿಗಳನ್ನು ತಯಾರಿಸುವ ಕಾರ್ಯದ ಅಧೀಕ್ಷಣೆ, ನಿರ್ದೇಶನ ಮತ್ತು ನಿಯಂತ್ರಣವು ಸಹಕಾರ ಚುನಾವಣಾ ಆಯೋಗದಲ್ಲಿ ನಿಹಿತವಾಗಿರುತ್ತದೆ. 2013-14 ನೇ ಸಾಲಿನಲ್ಲಿ 13371 ಪ್ರಾಥಮಿಕ ಸಹಕಾರ ಸಂಘಗಳಿಗೆ ಹಾಗೂ 155 ಮಾಧ್ಯಮಿಕ ಹಾಗೂ ಫೆಡರಲ್ ಸಹಕಾರ ಸಂಸ್ಥೆಗಳಿಗೆ ಚುನಾವಣೆ ನಡೆಸಲಾಗಿರುತ್ತದೆ. ಜಿಲ್ಲಾ ವಲಯ ಯೋಜನೆಗಳು ಜಿಲ್ಲಾ ವಲಯದಡಿ ಒಟ್ಟು 11 ಯೋಜನಾ ಕಾರ್ಯ ಕ್ರಮಗಳನ್ನು ಅನುಷ್ಠಾನಗೊಳಿಸಲು ಒಟ್ಟು ರೂ 586.00 ಲಕ್ಷಗಳನ್ನು ಒದಗಿಸಲಾಗಿರುತ್ತದೆ. ವಿವಿಧ ವರ್ಗದ ಸಹಕಾರಿ ಸಂಸ್ಥೆಗಳಿಗೆ ಸಹಾಸಹಾಯಧನ /ಎನ್.ಸಿ.ಡಿ.ಸಿ.ಯೋಜನೆ. (ಸಹಾಯಧನ) ಹಾಲು ಉತ್ಪಾದನಾ ಮಹಿಳಾ ಸಹಕಾರ ಸಂಘಗಳಿಗೆ ಮೂಲಭೂತ ಸಕೌರ್ಯಗಳಿಗಾಗಿ ಆರ್ಥಿಕ ಸಹಾಯ . ಸಣ್ಣ ಶಾಖೆಗಳ ಪ್ರಾರಂಭ ಮತ್ತು ವ್ಯವಹಾರ ಕಟ್ಟಡಗಳ ನಿರ್ಮಾಣ ವಿವಿಧ ವರ್ಗದ ಸಹಕಾರ ಸಂಘಗಳಿಗೆ ಷೇರು ಬಂಡವಾಳದ ಸಹಾಯ ( ಸಾಮಾನ್ಯ / ನಬಾರ್ಡ್ /ಎನ್.ಸಿ.ಡಿ.ಸಿ) ಇತರೆ ಸಹಕಾರ ಸಂಘಗಳ ಷೇರು ಬಂಡವಾಳ ವಿವಿಧ ವರ್ಗದ ಸಹಕಾರ ಸಂಘಗಳಿಗೆ ಸಾಲದ ಸಹಾಯ (ಎನ್.ಸಿ.ಡಿ.ಸಿ) ಸಾರ್ವತ್ರಿಕ ಕಾರ್ಯಗಾರ ನಿರ್ಮಾಣಕ್ಕಾಗಿ ಮಹಿಳಾ ಸಹಕಾರ ಸಂಘಗಳಿಗೆ ಸಾಲಗಳು. ವಿಶೇಷ ಘಟಕ ಯೋಜನೆಯಡಿ - ಆಸ್ತಿಗಳ ಸೃಷ್ಟಿಗಾಗಿ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿಅಭಿವೃದ್ದಿ ಬ್ಯಾಂಕುಗಳು ಮಂಜೂರು ಮಾಡಿದ ಸಾಲಗಳ ಮೇಲೆ ಶೇಕಡ 60 ರಷ್ಟು ಸಹಾಯಧನ ಮಹಿಳಾ ಸಹಕಾರ ಸಂಘಗಳಲ್ಲಿ ಹೂಡಿಕೆಗಳು ಪರಿಶಿಷ್ಟ ಜಾತಿಯವರಿಗೆ ವಿಶೇಷ ಘಟಕ ಯೋಜನೆ (ಸಾಲ) ವ್ಯವಹಾರ ಕಟ್ಟಡಗಳ ನಿರ್ಮಾಣ ಮತ್ತು ಮಹಿಳಾ ಸಹಕಾರ ಸಂಘಗಳಿಗೆ ಸಾಲಗಳು. ಮೂಲ : ಸಹಕಾರ ಸಿಂಧು