ಮಾರುಕಟ್ಟೆ ಸಂಪರ್ಕ: • ಜಿಲ್ಲಾ ಮಟ್ಟದ ತಜ್ಞರ ಸಮಿತಿಯು ಉತ್ಪನ್ನಗಳ ಮಾರುಕಟ್ಟೆಗೆ ಸಂಬಂಧಿಸಿದಂತೆ ಅಗತ್ಯ ಸಲಹೆ ಸೂಚನೆಗಳನ್ನು ನೀಡುವುದು. • ಹೋಬಳಿ, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಮಾರುಕಟ್ಟೆ ಸೌಲಭ್ಯಕ್ಕೆ ಬೇಕಾದ ಮೂಲ ಸೌಕರ್ಯಗಳನ್ನು ಜಿಲ್ಲಾ ಪಂಚಾಯತ್ಗಳಲ್ಲಿ ಬೇರೆ ಯೋಜನೆಗಳಲ್ಲಿ ಲಭ್ಯವಿರುವ ಅನುದಾನದಿಂದ ಒದಗಿಸಲು ಕ್ರಮಕೈಗೊಳ್ಳಬೇಕು ಯುವಜನ ವೃತ್ತಿ ಮೇಳಗಳ ಸಂಘಟನೆ : • ಯೋಜನಾ ಬೆಂಬಲ ಸಂಸ್ಥೆಯಿಂದ ಜಿಲ್ಲಾ ಮಟ್ಟದಲ್ಲಿ ಯುವಜನರ ಒಕ್ಕೂಟ ರಚನೆಯಾದ ನಂತರ ಜಿಲ್ಲೆಯಲ್ಲಿ ಯುವ ಜನರ ಮೇಳವನ್ನು ಸಂಘಟಿಸಲು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಣಾಧಿಕಾರಿಗಳು ಚಾಲನೆ ನೀಡುವುದು. • ಯೋಜನಾ ಬೆಂಬಲ ಸಂಸ್ಥೆಗಳ ಸಮಿತಿ ಮತ್ತು ಯುವಜನರ ಒಕ್ಕೂಟಗಳ ಸಹಯೋಗದಲ್ಲಿ ಪ್ರತಿ 3 ತಿಂಗಳಿಗೊಮ್ಮೆ ಯುವಜನ ಮೇಳವನ್ನು ಸಂಘಟಿಸುವುದು. • ಯುವಜನ ಮೇಳಗಳಲ್ಲಿ ಜಂಟಿ ಭಾದ್ಯತಾ ಗುಂಪು (ಜೆಎಲ್ಜಿ)ಗಳು ಯುವಜನರು ಉದ್ಯಮದ ಮೂಲಕ ಉತ್ಪಾದಿಸಿದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶವನ್ನು ಕಲ್ಪಿಸುವುದು. • ಯುವಜನರೊಂದಿಗೆ ಜಿಲ್ಲಾ ಮಟ್ಟದ ತಜ್ಞರ ಸಮಿತಿ ಸಂವಾದ ಮಾಡುವುದಲ್ಲದೇ ಉದ್ದಿಮೆಯನ್ನು ಉತ್ತಮಗೊಳಿಸಲು ಅಗತ್ಯವಾದ ಸಲಹೆ / ಸೂಚನೆಗಳನ್ನು ನೀಡುವುದು. ಮೂಲ: ಅರ್.ಜಿ.ಸಿ.ವೈ