ಗ್ರಾಮಾಂತರ ಪ್ರದೇಶಗಳಿಂದ ವಿವಿಧ ಕಾಲೇಜುಗಳಿಗೆ ವ್ಯಾಸಂಗ ಮಾಡಲು ಬರುವ ಬಡ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಮುಂದುವರೆಸಲು ಅನುಕೂಲವಾಗುವಂತೆ ಸರ್ಕಾ ರಿ ಕಾಲೇಜು ವಿದ್ಯಾರ್ಥಿನಿಲಯಗಳಲ್ಲಿ ಉಚಿತ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಕಲ್ಪಿಸುವ ಸಲುವಾಗಿ ಈ ಕಾಯಕ್ರಮವನ್ನು ಕಾರ್ಯಗತಗೊಳಿಸಲಾಗುತ್ತಿದೆ. (ಅ) ಪ್ರತಿಯೊಬ್ಬ ವಿದ್ಯಾರ್ಥಿಗೆ ಭೋಜನ ವೆಚ್ಚಕ್ಕಾಗಿ ಪ್ರತಿ ತಿಂಗಳಿಗೆ ಭಾರತ ಸರ್ಕಾ ರದ ವಿದ್ಯಾರ್ಥಿವೇತನ ಹಾಗೂ ಇ.ಬಿ.ಎಲ್ . ವೆಚ್ಚಗಳು ಸೇರಿ ತಲಾ ರೂ.1200.00 ಮೀರದಂತೆ ಭರಿಸಲಾಗುವುದು. (ಆ)ಗ್ರಂಥಾಲಯ ಸೌಲಭ್ಯ ಕಲ್ಪಿಸಲಾಗುವುದು. ಮೂಲ : ಸಮಾಜ ಕಲ್ಯಾಣ ಇಲಾಖೆ,ಮಂಗಳೂರು