2007-08 ನೇ ಸಾಲಿನಲ್ಲಿ ಈ ಹೊಸ ಯೋಜನೆಯನ್ನು ಕರ್ನಾಟಕ ಸರ್ಕಾರದಿಂದ ಪ್ರಾರಂಬಿಸಲಾಗಿದ್ದು, ತೀವ್ರ ನ್ಯೂನಪೋಷಣೆಗೊಳಗಾದ ಮಕ್ಕಳ ಪೌಷ್ಠಿಕ ಮಟ್ಟ ಸುಧಾರಿಸಿ ಸಾಮಾನ್ಯ ದರ್ಜೆಗೆ ತರಲು ವೈದ್ಯಾದಿಕಾರಿಗಳ ಸೂಚನೆಯಂತೆ ಔಷದೋಪಚಾರ ಹಾಗೂ ಚಿಕಿತ್ಸಾ ಆಹಾರಕ್ಕಾಗಿ ಪ್ರತಿ ಮಗುವಿಗೆ ವರ್ಷಕ್ಕೆ ರೂ.750/-ನ್ನು ನೀಡಲಾಗುತ್ತಿದೆ. 2012-13 ನೇ ಸಾಲಿನಲ್ಲಿ ತೀವ್ರ ನ್ಯೂನಪೋಷಣೆಗೆ ಒಳಗಾದ 54348 ಮಕ್ಕಳ ಔಷಧೋಪಚಾರದ ವೆಚ್ಚಕ್ಕಾಗಿ ರೊ 407.61 ಲಕ್ಷಗಳ ವೆಚ್ಚ ಭರಿಸಲಾಗಿದೆ. 2010-11 ನೇ ಸಾಲಿನಿಂದ ಈ ಯೋಜನೆಯಡಿ ಬಾಲಸಂಜೀವಿನಿ ಎಂಬ ಉಪ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಸದರಿ ಯೋಜನೆಯಡಿ 0-6 ವರ್ಷದ ಅಂಗನವಾಡಿ ಕೇಂದ್ರಗಳಲ್ಲಿನ ಬಿ.ಪಿ.ಎಲ್ ವರ್ಗದ ಅನಾರೋಗ್ಯ ಪೀಡಿತ ಹಾಗೂ 3 ನೇ ದಜರ್ೆಯ ಚಿಕಿತ್ಸೆಯ ಅವಶ್ಯಕತೆ ಇರುವ ಮಕ್ಕಳಿಗೆ ಈ ಕೆಳಕಂಡ ಆಯ್ದ 20 ಆಸ್ಪತ್ರೆಗಳಲ್ಲಿ ಉಚಿತ ಸೇವೆಯನ್ನು ಒದಗಿಸಲಾಗಿದೆ. ಇಂದಿರಾಗಾಂದಿ ಮಕ್ಕಳ ಆರೋಗ್ಯ ಸಂಸ್ಥೆ, ಬೆಂಗಳೂರು ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ, ದಾವಣಗೆರೆ ಡಾ.ಪ್ರಭಾಕರ ಕೋರೆ ಉಚಿತ ಆಸ್ಪತ್ರೆ, ಬೆಳಗಾಂ ಎಂ.ಆರ್.ಮೆಡಿಕಲ್ ಕಾಲೇಜ್ - ಬಸವೇಶ್ವರ ಮತ್ತು ಸಂಗಮೇಶ್ವರ ಆಸ್ಪತ್ರೆ, ಗುಲ್ಬರ್ಗ ಕಸ್ತೂರಬಾ ಮೆಡಿಕಲ್ ಕಾಲೇಜ್ ಆಸ್ಪತ್ರೆ, ಮಂಗಳೂರು -ಲೇಡಿ ಘೋಷ್ ಹಾಗೂ ವೆನ್ಲಾಕ್ ಆಸ್ಪತ್ರೆ. ಹಾನಗಲ್ ಕುಮಾರೇಶ್ವರ ವೈದ್ಯಕೀಯ ಸಂಸ್ಥೆ, ಬಾಗಲಕೋಟೆ ನವೋದಯ ವೈದ್ಯಕೀಯ ಸಂಸ್ಥೆ, ರಾಯಚೂರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ, ಧಾರವಾಡ ಬಸವೇಶ್ವರ ಮೆಡಿಕಲ್ ಕಾಲೇಜ್ ಆಸ್ಪತ್ರೆ, ಚಿತ್ರದುಗರ್ಾ ಚೆಲುವಾಂಬ ಆಸ್ಪತ್ರೆ, ಮೈಸೂರು ಬಿ. ಎಂ ಪಾಟೀಲ್ ಮೆಡಿಕಲ್ ಕಾಲೇಜ್ ಆಸ್ಪತ್ರೆ, ಬಿಜಾಪುರ. ಆರ್.ಎಲ್ ಜಾಲಪ್ಪ ಮೆಡಿಕಲ್ ಕಾಲೇಜ್ ಆಸ್ಪತ್ರೆ, ಕೋಲಾರ ಡಾ|| ಬಿದರಿ ಅಶ್ವಿನಿ ಆಸ್ಪತ್ರೆ, ಬಿಜಾಪುರ. ವಿಕ್ಟೋರಿಯಾ ಆಸ್ಪತ್ರೆ, ಬೆಂಗಳೂರು. ವಾಣಿ ವಿಲಾಸ್ ಆಸ್ಪತ್ರೆ, ಬೆಂಗಳೂರು. ಬೌರಿಂಗ್ ಆಸ್ಪತ್ರೆ, ಬೆಂಗಳೂರು. ಕೆ.ಎಮ್.ಸಿ ಆಸ್ಪತ್ರೆ, ಮಣಿಪಾಲ್, ಉಡುಪಿ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್), ಬಳ್ಳಾರಿ ಎಸ್.ಎಸ್.ಎಮ್ ಆಸ್ಪತ್ರೆ, ದಾವಣಗೆರೆ ಸಿ.ಏ.ಎಸ್.ಐ ರೆಡ್ ಪ್ರಿನ್ ಆಸ್ಪತ್ರೆ, ಹಾಸನ 3 ನೇ ಹಂತದ ಚಿಕಿತ್ಸೆಯ ಅವಶ್ಯಕತೆ ಇರುವ ಮಗುವಿಗೆ ಗರಿಷ್ಟ ರೂ. 35000 ಹಾಗೂ ನವಜಾತ ಶಿಶುವಿನ ಆರೋಗ್ಯ ಮತ್ತು ಚಿಕಿತ್ಸೆಗೆ ರೂ 50000 ಗಳನ್ನು ಚಿಕಿತ್ಸಾ ವೆಚ್ಚವಾಗಿ ಒದಗಿಸಲಾಗುತ್ತದೆ. 2012-13 ನೇ ಸಾಲಿನಲ್ಲಿ ಇದಕ್ಕಾಗಿ ರೂ.1091.22 ಲಕ್ಷಗಳನ್ನು 7957 ಮಕ್ಕಳಿಗೆ ಚಿಕಿತ್ಸೆ ನೀಡಲು ಉಪಯೋಗಿಸಲಾಗಿದೆ.