ತಾಂಡಾದ ಜನರ ಅಭಿವೃದ್ಧಿಗಾಗಿ ನಿಗಮ ಮತ್ತು ಇಲಾಖೆಗಳ ಯೋಜನೆಗಳು ಈ ಕೆಳಗಿನಂತಿವೆ. ನಿಗಮದ ಕಾರ್ಯ ಯೋಜನೆಗಳು ತಾಂಡಗಳಿಗೆ ಮೂಲಭೂತ ಸೌಕರ್ಯ ಒದಗಿಸುವ ಯೋಜನೆಗಳು:- ತಾಂಡಗಳಲ್ಲಿ ಸರ್ವಋತು ರಸ್ತೆಗಳು ಮತ್ತು ಚರಂಡಿಗಳು ಹತ್ತಿರದ ತಾಂಡಗಳ ಮದ್ಯದ ಸಂಪರ್ಕ ರಸ್ತೆ ಮುಖ್ಯ ರಸ್ತೆಯಿಂದ ತಾಂಡಾಗಳಿಗೆ ಸಂಪರ್ಕ ರಸ್ತೆ ಶುದ್ದ ಕುಡಿಯುವ ನೀರು ಬೀದಿ ದೀಪಗಳು ಮತ್ತು ವಿದ್ಯುತ್ ಸಂಪರ್ಕ ಬಸ್ ನಿಲುಗಡೆ ಸ್ಥಳದಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಆರೋಗ್ಯ ಮತ್ತು ಶೈಕ್ಷಣಿಕ ಮೂಲ ಸೌಕರ್ಯ ಯೋಜನೆಗಳು:- ಆರೋಗ್ಯ ಕೇಂದ್ರಗಳು ಆರೋಗ್ಯ ತಪಾಸಣಾ ಶಿಬಿರ ಶೈಕ್ಷಣಿಕವಾಗಿ ಅಂಗನವಾಡಿ ಕೇಂದ್ರ, ಋತುಮಾನ ಶಾಲೆಗಳು ತಾಂಡಾ ನಿವಾಸಿಗಳಿಗೆ ಅರಿವು ಮತ್ತು ಜಾಗೃತಿ ಕಾರ್ಯಕ್ರಮಗಳು:- ನಿಗಮ ಮತ್ತು ಸರ್ಕಾರ ಅಭಿವೃದ್ದಿ ಯೋಜನೆಗಳ ಮಾಹಿತಿ ಒದಗಿಸುವುದು. ಪ್ರಚಲಿತ ಕಾಯ್ದೆಗಳು-ಮಾಹಿತಿ ಹಕ್ಕು, ಶಿಕ್ಷಣ ಹಕ್ಕು, ಮತದಾನದ ಹಕ್ಕು, ಕೆಲಸದ ಹಕ್ಕು, ಬಂಜಾರ ಜನರ ಪಾರಂಪರಿಕ ಮತ್ತು ಸಾಂಸ್ಕøತಿಕ ಆಚಾರ ವಿಚಾರ ಸದ್ ಸಂಪ್ರದಾಯಗಳಿಗೆ ಉತ್ತೇಜನ ಆರ್ಥಿಕ ಮೂಲಭೂತ ಸೌಕರ್ಯಗಳು:- ಪ್ರತಿಭಾವಂತ ವಿದ್ಯಾವಂತ ನಿರುದ್ಯೋಗಿ ಆದ್ಯತೆ ಮೇರೆಗೆ ಬಿ.ಇ ಮತ್ತು ಇಂಜಿನಿಯರಿಂಗ್ ಡಿಪ್ಲೋಮೊ ಇವರಿಗೆ ಗುತ್ತಿಗೆದಾರರಾಗಿ ಲೈಸೆನ್ಸ್ ದೊರೆಯುವಂತೆ ಸಂಬಂಧಿಸಿದ ಇಲಾಖೆಗಳ ಕಾರ್ಯಕ್ರಮದೊಂದಿಗೆ ಸಮನ್ವಯ ಸಾಧಿಸುವುದು. ನಿರುದ್ಯೋಗಿ ವಿದ್ಯಾವಂತ ಯುವಕರಿಗೆ ಮೇಷನ್, ಕಾರ್ಪೇಂಟರಿ/ಬಿಲ್ಡಿಂಗ್, ಎಲೆಕ್ಟ್ರಿಕಲ್, ಪೈಂಟಿಂಗ್, ಕಂಪ್ಯೂಟರ್, ಬಾರ್ಬೈಂಡಿಂಗ್, ಮೋಟಾರ್ ರೀಪೇರಿ, ಬೋರ್ವೆಲ್, ಗೃಹೋಪಯೋಗಿ ಯಂತ್ರಗಳ ರಿಪೇರಿ, ತೋಟಗಾರಿಕೆ ತರಬೇತಿ ಮುಂತಾದ ವೃತ್ತಿ ಕೌಶಲ್ಯ ತರಬೇತಿ ಕೇಂದ್ರ. ವಿದ್ಯಾವಂತ ಯುವತಿಯರಿಗೆ ಹೊಲಿಗೆ ತರಬೇತಿ, ಉಡುಪು ತಯಾರಿ, ಬ್ಯೂಟಿ ಪಾರ್ಲರ್, ಕಸೂತಿ, ಕಂಪ್ಯೂಟರ್, ಜರಿ, ಜರ್ದೋಸಿ ಕೌಶಲ್ಯ ಒದಗಿಸುವ ತರಬೇತಿ ಕೇಂದ್ರಗಳು. ಬಂಜಾರ ಉಡುಗೆ ತೊಡಿಗೆಗಳ ಆಧುನಿಕ ರೂಪ ನೀಡಲು ಬಂಜಾರ ಕಸೂತಿ ಕೌಶಲ್ಯಕ್ಕೆ ಹೊಸ ತಂತ್ರಜ್ಞಾನ ಒದಗಿಸಿ, ಗುಣವiಟ್ಟ ಹೆಚ್ಚಿಸುವುದು. ಬಂಜಾರ ಉಡುಪು ತಯಾರಿಕೆಗೆ ಬೇಕಾದ ಕಚ್ಚಾವಸ್ತು, ಮಾರುಕಟ್ಟೆ ಮಾಹಿತಿ ನೀಡಿ, ಉಡುಪುಗಳನ್ನು ರಫ್ತು ಮಾಡಲು ಅನುಕೂಲ ಮಾಡಿಕೊಡುವುದು. ತಾಂಡಾಗಳ ವಸತಿ ಯೋಜನೆ. ವಸತಿ ಕೊರತೆ ಇರುವ ತಾಂಡಾಗಳ, ಕುಟುಂಬಗಳ ಅಗತ್ಯತೆಯನ್ನಾಧರಿಸಿ ನಿವೇಶನ ಒದಗಿಸುವುದು. ತಾಂಡಾಗಳ ಪಕ್ಕದಲ್ಲಿ ಜಮೀನು ದೊರೆತಲ್ಲ್ಲಿ ಖರೀದಿಸಿ ತಾಂಡಾ ಬಡಾವಣೆಯನ್ನು ನಿರ್ಮಿಸುವುದು. ಹತ್ತಿರ ಇರುವ ಮೂರು ನಾಲ್ಕು ತಾಂಡಾಗಳ ಪರದಿಯಲ್ಲಿ ಸರ್ಕಾರಿ/ಖಾಸಗಿ ಜಮೀನು ಪಡೆದು ಬಡಾವಣೆ ರಚಿಸಿ ಕರ್ನಾಟಕ ಗೃಹ ಮಂಡಳಿ/ವಸತಿ ಯೋಜನೆಗಳ ಮೂಲಕ ಮನೆ ಕಟ್ಟಿಸಿ ಕೊಡುವುದು. ತಾಂಡಾಗಳ ಸಕ್ರಮೀಕರಣ ಕಂದಾಯ ಗ್ರಾಮಗಳಾಗಿ ಪರಿವರ್ತನೆ: ಗೋಮಾಳ, ಸರ್ಕಾರಿ ಜಮೀನು, ಅರಣ್ಯ ಮತ್ತು ಖಾಸಗಿ ಜಮೀನುಗಳಲ್ಲಿ ನಿರ್ಮಾಣಗೊಂಡ ತಾಂಡಾ ನಿವಾಸಿಗಳ ಮನೆಗಳನ್ನು ತಜ್ಞರ ಸಮಿತಿಯ ಶಿಫಾರಸ್ಸು ಮತ್ತು ಸರ್ಕಾರದ ಆದೇಶದನ್ವಯ ಸಕ್ರಮಣಗೊಳಿಸಲು ನೆರವು. ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಲು ನೆರವು. ಅರಣ್ಯ ಕಾಯ್ದೆ 2006ರ ಅನ್ವಯ ತಾಂಡಾದ ನಿವಾಸಿಗಳು ಉಳಿಮೆ ಮಾಡುತ್ತಿರುವ ಅರಣ್ಯ ಜಮೀನಿನ ಹಕ್ಕು ಪತ್ರ ಕೊಡಿಸಲು ನೆರವು. ಬಂಜಾರ ಭಾಷಾಭಿವೃದ್ದಿ ಮತ್ತು ಸಾಂಸ್ಕøತಿಕ ಚಟುವಟಿಕೆಗಳು ಬಂಜಾರ ಭಾಷಾ ಅಭಿವೃದ್ದಿಗೆ ಪ್ರೋತ್ಸಾಹ, ಪ್ರಚಲಿತದಲ್ಲಿರುವ ಬಂಜಾರ ಒಗಟು, ಗಾದೆ, ಜನಪದ ಹಾಡು, ಪೂಜಾ ವಿಂತಿ, ಕಸಳಾತ್ ಮುಂತಾದವುಗಳ ಸಂಗ್ರಹಣೆ ಮತ್ತು ಮುದ್ರಣ ಬಂಜಾರ ಭಾಷಾ ಶಬ್ದಕೋಶ ಬಂಜಾರ ಭಾಷೆಗೆ ಬಳಸುವ ಲಿಪಿ ಕುರಿತು ನಿರ್ಣಯ ನಿಗಮದಿಂದ ಮಾಸ ಪತ್ರಿಕೆ ಹೊರಡಿಸುವುದು ಬಂಜಾರ ಸಾಂಸ್ಕøತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ಬಂಜಾರ ಪರಾಂಪರಿಕ ಪದ್ದತಿಗಳ ಬಲವರ್ಧನೆ. ಸೂರಗೊಂಡನಕೊಪ್ಪ ಸೇವಾಲಾಲ್ ಜನ್ಮ ಸ್ಥಳದ ಸಮಗ್ರ ಅಭಿವೃದ್ದಿ ಯೋಜನೆ:- ಸಂತ ಶ್ರೀ ಸೇವಾಲಾಲ್ ಮಹಾಮಠದ ಜೀರ್ಣೋದ್ಧಾರ, ಹಾಗೂ ಆಗಮಿಸುವ ಯಾತ್ರಿಗಳಿಗಾಗಿ ಮೂಲಭೂತ ಸೌಕರ್ಯ ಒದಗಿಸುವುದು, ಮಹಾಮಠದ ವ್ಯಾಪ್ತಿಯಲ್ಲಿ ಸಭಾ ಭವನ, ಅತಿಥಿ ಗೃಹ, ತರಬೇತಿ ಕೇಂದ್ರ, ವಸತಿ ಶಾಲೆ, ವಸ್ತು ಸಂಗ್ರಾಹಲಯ, ಗ್ರಂಥಾಲಯ, ತಾಂಡಾ ಮಾದರಿ ಥೀಮ್,ಗೋಶಾಲೆ ಮತ್ತು ಗೋತಳಿ ಅಭಿವೃದ್ದಿ ಕೇಂದ್ರ. ಉದ್ಯೋಗಸ್ಥ/ತರಬೇತಿ ಪಡೆಯುವ ಮಹಿಳೆಯರಿಗೆ ಹಾಸ್ಟೆಲ್ ವ್ಯವಸ್ಥೆ :- ಬೆಂಗಳೂರು ನಗರದಲ್ಲಿ ಉದ್ಯೋಗ ಪಡೆದ ಮತ್ತು ಉದ್ಯೋಗ ಪಡೆಯುಲು ಸಂದರ್ಶನಕ್ಕೆ ಬರುವ ಮಹಿಳೆಯರಿಗೆ ತಾತ್ಕಾಲಿಕ ವಸತಿ ಒದಗಿಸಲು ವಿದ್ಯಾವಂತ ಯುವತಿಯರಿಗೆ ವೃತ್ತಿಕೌಶಲ್ಯ ನೀಡಲು ತರಬೇತಿ ಕೇಂದ್ರ. ಕಳಂಕಿತ ಮತ್ತು ಅನಿಷ್ಠ ಪದ್ದತಿಗಳನ್ನು ಹೋಗಲಾಡಿಸುವುದು:- ಮಧ್ಯಪಾನದಂತ ದುಶ್ಚಟಗಳನ್ನು ಬಿಡಿಸಿ, ದುಶ್ಚಟಗಳ ಪರಿಣಾಮಕ್ಕೊಳಗಾದವರಿಗೆ ಪುನರ್ ವ್ಯವಸ್ಥೆ ಮಾಡುವುದು. ಮೌಡ್ಯ ಮತ್ತು ಅಂಧ ಶ್ರದ್ದೆ ವಿರುದ್ಧ ಜಾಗೃತಿ. ಕಳ್ಳಬಟ್ಟಿ ನಿಯಂತ್ರಣ ಮತ್ತು ಅದರ ಪರಿಣಾಮಕ್ಕೊಳಗಾದವರ ಪುನರ್ ವಸತಿ. ತಾಂಡಗಳಲ್ಲಿ ನಾಗರೀಕ ಸೌಲಭ್ಯಗಳನ್ನು ಒದಗಿಸುವ ಯೋಜನೆಗಳು:- ತಾಂಡಾಗಳ ನಿವಾಸಿಗಳಿಗೆ ಸಮೂಹ ಶೌಚಾಲಯ ನಿರ್ಮಾಣ ಮತ್ತು ನಿರ್ವಹಣೆ ವ್ಯವಸ್ಥೆ ತಾಂಡಾಗಳಲ್ಲಿ ರಸ್ತೆ ಮತ್ತು ಚರಂಡಿ ವ್ಯವಸ್ಥೆ ರಸ್ತೆಗಳನ್ನು ಸಿ.ಸಿ.ರಸ್ತೆಗಳನ್ನಾಗಿ ಪರಿವರ್ತಿಸುವುದು. ಬಂಜಾರ ಭವನ ಮತ್ತು ಸೇವಾಲಾಲ್ ಸಮುದಾಯ ಭವನ ಕೇಂದ್ರಗಳ ನಿರ್ಮಾಣ:- ಜಿಲ್ಲಾ ಮಟ್ಟಗಳಲ್ಲಿ ಬಂಜಾರ ಭವನಗಳ ನಿರ್ಮಾಣ. ತಾಂಡಾಗಳಲ್ಲಿ ಸೇವಾಲಾಲ ಸಮುದಾಯ ಭವನಗಳ ನಿರ್ಮಾಣ ಭವನಗಳ ನಿರ್ವಹಣೆ ವ್ಯವಸ್ಥೆಗೆ ನೆರವು ಮೂಲ : ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ